Monday, 1 July 2013

ತಂಗಿಯ ಪ್ರೀತಿಯಾ ಮಳೆಯಲಿ !!!!


ತಂಗಿಯ ಪ್ರೀತಿಯಾ  ಮಳೆಯಲಿ !!!!

ಪುಟ್ಟ ನೀನು ನನ್ನ ಜೊತೆ ಉಟ್ಟದೆ ಇರಬಹುದು ಆದರೆ ನೀನು ನನಗೆ ತಂಗಿ ಪ್ರೀತಿ ಇದೇನಾ ಅಂತ ತೋರಿಸಿಕೊಟ್ಟವಳು, ನಿನಗೆ ಕೋಟಿ ಕೋಟಿ ನಮನ, ನಿನ್ನ ತುಂಟಾಟ, ನಿನ್ನ ಕೋಪ, ನಿನ್ನ ಪ್ರೀತಿ ಎಲ್ಲವೂ ಅನುಭವಿಸಲು ಈ ಜನ್ಮ ಸಾಲದು,

ಕೆಲವೊಂದು ಸಲ ಅಸ್ಟೇ ಹರ್ಟ್ ಮಾಡ್ತೀಯಾ, ಕೆಲವೊಂದು ಸಲ ನೀನು ನನ್ನ ಮರೆತೇ ಹೋಗ್ತೀಯೇನೋ ಅಂತ ಭಯ, ಅದಿಕೆ ನಿನಗೆ ನಾನು ಕೋಪ ಬಂದು ಬಯ್ತೀನಿ ಅಸ್ಟೇ, ಪುಟ್ಟ ನೀನು ನನ್ಜೊತೆ  ಮಾತಾಡ್ದೆ ಇದ್ದ 3 ದಿನ ತುಂಬಾ ನೋವು ಅನುಬವಿಸಿದಿನಿ, ನೀನು  ಎಸ್ಟ್ ಹಟ ಮಾಡ್ತೀಯಾ! ನೀನು ನನಗೆ ಮೆಸೇಜ್ ಮಡ್ದ್ದೆ, ಹಾಗೆ ಇದ್ದ್ಯಾಲ ಆವಾಗ ತುಂಬಾ ನೋವಾ ಯಾತು. ಪುಟ ತುಂಬಾ ಅತ್ತಿದೀನಿ ಪ್ರತಿ ಮೆಸೇಜ್ ಬರುವಾಗ್ಲೂ ನೀನೇ ಮಾಡಿರ್ತಿಯ ಅಂತ ಚಡಪಡಿಸಿದ್ದು ಉಂಟು, ಕಾಲ್ ಬಂದಾಗ ನೀನೇ ಮಾಡಿರ್ತಿಯ ಅಂತ ನೋಡೋ ತವಕದಲ್ಲಿ, ಅದು ಬೇರೆಯಾವ್ರುದು ಅಂದಾಗ ಎಲ್ಲಿಲದ ಕೋಪ.

 




ನನಗೆ ಅಕ್ಕ ತಂಗಿಯರಿಲ್ಲ.ಅಭದ್ರತೆ ಯೆಂಬುದು ಚಿಕ್ಕಂದಿನಿಂದಲೂ ನನ್ನ ಬೆನ್ನತ್ತಿದ ಪೀಡೆ. ನನಗೆ ಸಿಗಬೇಕಾದ ಪ್ರೀತಿ ಎಲ್ಲಿ ಸಿಗದೇ ಹೋಗುತ್ತದೋ, ಎಲ್ಲಿ ಇನ್ನೊಬ್ಬರ ಪಾಲಾಗುತ್ತದೋ ಅಂತ ಅಟಮಟಿಸುತ್ತೇನೆ. ಕಾರಣಕ್ಕಾಗಿಯೇ ಅವತ್ತು ಮಧ್ಯಾಹ್ನ ನಿನ್ನೊಂದಿಗೆ ಒರಟಾಗಿ ಮೆಸೇಜ್ ಮಡ್ದ್ದೆ. ಹೀಗೆ ಪೊಸೆಸೀವ್ ಆಗಿರೋದು ತಪ್ಪು. ಎಷ್ಠಾದರೂ ನೀನು ನನ್ನ ಪುಟ್ಟ ಬೇಸರ ಮಾಡಿಕೊಳ್ಳಬೇಡ, ನನ್ನ ಸೆಡವು, ನನ್ನ ಮುನಿಸು, ಒರಟು ಮಾತು, ಹಠ, ಜಗಳ ಇವೆಲ್ಲಾ ತುಂಬಾ ತಾತ್ಕಾಲಿಕ. ಒಂದೇ ಒಂದು ಮುಟಿಗೆಯಷ್ಟು ಪ್ರೀತಿ ಸಿಕ್ಕರೂ ಚಲಿಸಿಹೋಗುವುವನು ನಾನು. ನನಗೆ ತುಂಬಾ ಅತಿರೇಕವೆನಿಸುವಂತಹ ಡಿಮ್ಯಾಂಡ್ ಗಳಿಲ್ಲ. ನೀನು ನನಗೋಸ್ಕರ ಏನೂ ಮಾಡಬೇಕಾಗಿಲ್ಲ. ಒಂದು ಹಿಡಿ ಪ್ರೀತಿ ಕೊಡು; ನನ್ನದು ಹುಚ್ಚು ಬಡಬಡಿಕೆ ಅನ್ನಿಸಿದರೂ ಸಹನೆಯಿಂದ ಕೇಳಿಸಿಕೋ. ನನ್ನಲ್ಲೊಂದು ವಿಶ್ವಾಸ ಮೂಡಿಸು. ನೀನು ನನ್ನ ಜೊತೆ  ಇರ್ತೀನಿ ಅಂತ ಸಾಕು, ಹೇಯ್ ಪುಟ್ಟ, ಜಗತ್ತಿನಲ್ಲಿ ನನಗೆ ಬೇರೆ ಇದ್ದಾರಾದರೂ ಯಾರು ಹೇಳು? ಜಗಳಕ್ಕೂ ನೀನೇ ಬೇಕು, ಪ್ರೀತಿಗೂ ನೀನೇ ಬೇಕು ಪುಟ್ಟ ನಿನ್ನ ಆಟಗಳು, ತುಂಟಾಟಗಳು ಎಲ್ಲಾ ಮಗುವಿನ ತರ, ನಿನ್ನ ರೇಗಿಸ ಬೇಕು ಅಂದ್ರೆ ತುಂಬಾ ಈಸ್ಟ, ನೀನು ಸೀಟ್ ಮಾಡ್ಕೊಂಡ್ ಗುಡ್ ಬೆಯ್, ಏಳ್ತಿಯಲ್ಲ ಮತ್ತೆ ಮೆಸೇಜ್ ಮಾಡ್ತಿಯಾಲ ಆವಾಗ ಅಂತೂ ತುಂಬಾ ಮಿಸ್ ಮಾಡ್ಕೊತಿನಿ, ನೀನು ಕೋಪ ಬಂದಾಗ ನನ್ನ ನಂಬರ್ ರಿಜೆಕ್ಟ್ ಲಿಸ್ಟ್ ಲಿ ಆಕ್ತೀನಿ ಅನ್ನುವಾಗ ಅಸ್ಟೇ ಬೇಸರವಾಗುತೆ ಪುಟ, ನೀನು ಫೇಸ್ ಬುಕ್ ಲೀ ಇರೋದೆ ಈಸ್ಟ ಇಲ್ಲಾ ನಂಗೇ, ಆದ್ರೂ ನೀನು ಅದನ್ನ ಬಿಡಲ್ಲ, ಅದ್ರಲ್ಲಿ ಸ್ವಲ್ಪ ಬೇಸರ ಇದೆ, ಅದಕ್ಕೂ ಕಾರಣ ನನ್ನ ಪೊಸೆಸಿವ್ನೆಸ್ ಅಸ್ಟೇ. ನೀನು ತುಂಬಾ ಬೇಸರದಲ್ಲಿ ಇದ್ದ ದಿನನು ನಾನು ನೋಡಿದ್ದೇನೆ, ಅದು ಎನಿಕ್ಕೆ ಅಂತಾನೂ ಗೊತ್ತು ನಿಂಗೆ, ಅವತ್ತು ನೀನು ಪಟ್ಟ ಕಸ್ಟ ನಿನ್ನ ಸಮಾದಾನ ಮಾಡಿದ ರೀತಿ ನೆನೆಸ್ಕೊಂಡ್ರೆ ಇವತಿಗೂ ಕಣ್ಣಾಲಿ ನೀರು ಹನಿ ಹಾಕುತ್ತೆ, ಅದೇ ದಿನ ಫೋನ್ ಅಲ್ಲಿ ನಾನು ತಪ್ಪು ಮಾಡಿಲ್ಲಾ ಅಣ್ಣಾ ಅನ್ನೋ ನಿನ್ನ ವಾಯ್ಸ್ ಲೀ ಕರಗೀ ನೀನು ಏನು ತಪ್ ಮಾಡಿಲ್ಲಾ ಅನ್ನೋದ್ ಗೊತ್ತಾಗ್ತಿತು. ಪುಟ್ಟ ಅವಾಗವಾಗ ನೀನು ನನ್ನ ತುಂಬಾ Hate ಮಾಡ್ತೀಯಾ ಅಂತ ಅನ್ಸಿದ್ದು ತಪ್ಪಿಲ್ಲಾ, ಅದಿಕ್ಕೆ ರೀಸನ್ ನೀನು ನನಗೆ ಫೆಸ್ ಬುಕ್ ಲೀ ರಿಕ್ವೆಸ್ಟ್ ಕಲ್ಸಿಲ್ಲಾ ಅಂತ, ಯಾಕೋ!.. ಏನೇ ರೀಸನ್ ಕೊಡು ಆದ್ರೆ ಅದು ನೀನು ಮಡಿದು ತಪ್ಪು ಅಂತ ಅನ್ಸ್ಲೆ ಇಲ್ವಾ ಪುಟ್ಟ ನೀನು ಎಸ್ಟೆ ಹರ್ಟ್ ಮಾಡಿದ್ರು, ನಾನು ನಿಂಜೊತೇನೆ ಇರ್‌ಬೇಕು ಅನ್ನೋ ಆಶೆ. ಯಾವಾಗ್ಲೂ ನಾನು ಕೇಳೋ ಅದೇ ಮಾತು ಮತ್ತೆ ಏಳುತ್ತಾ ಇದ್ದೀನಿ ನನ್ನ ಬೀಟ್ ಒಗ್ಬೇಡ…..

-      ಪ್ರೀತಿಯಾ ಆಣ್ಣಾ

1 comment:

  1. ತಂಗಿಯ ಬಗ್ಗೆ ನಿಮ್ಮ ಪ್ರೀತಿ ಈ ಲೇಖನದಲ್ಲಿ ಬಹಳ ಚೆನ್ನಾಗಿ ವ್ಯಕ್ತ ಪಡಿಸಿದ್ದೀರಿ. ನಿಮ್ಮ ಈ ಲೇಖನ ಇಷ್ಟವಾಯಿತು.

    ReplyDelete